ಸಂಪಾದಕೀಯ ಮಂಡಳಿ
Editorial Board Members & Scholars
ಡಾ.ಕೆ.ಎ.ಓಬಳಪ್ಪ
ಸಂಪಾದಕರುಡಾ.ಕೆ.ಎ.ಓಬಳೇಶ್: ಇವರು ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದಲ್ಲಿ 16 ಜನವರಿ 1985ರಂದು ಜನನ, ತಂದೆ ಏಕಾಂತಪ್ಪ, ತಾಯಿ ಗಿರಿಜಮ್ಮ. ಕೆ.ಎ.ಓಬಳೇಶ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ನೊಂದಿಗೆ ಐದು ಚಿನ್ನದ ಪದಕ, ನಾಲ್ಕು ನಗದು ಬಹುಮಾನವನ್ನು ಪಡೆದಿರುತ್ತಾರೆ. ಕನ್ನಡ ವಿಶ್ವವಿದ್ಯಾಲಯದಿಂದ ಡಾ.ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ 'ಕನ್ನಡ ಚಿಂತನ ಸಾಹಿತ್ಯದಲ್ಲಿ ಬೌದ್ಧ ದರ್ಶನದ ಆಯಾಮಗಳು' ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಹಾಗೂ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಇವರು ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ಆಸಕ್ತಿಯನ್ನು ಹೊಂದಿದ್ದು, ಹಲವಾರು ಸಂಶೋಧನ ಲೇಖನ, ನಾಟಕ, ಕವಿತೆಗಳನ್ನು ರಚಿಸಿದ್ದಾರೆ. 'ಆಸ್ಮಿತೆ ಮತ್ತು ಆತ್ಮವಿಮರ್ಶೆ' (ವೈಚಾರಿಕ) 'ಬೋಧಿನರಳು' (ಕವನ ಸಂಕಲನ) 'ವಿವೇಕಯಾನ' (ನಾಟಕ), 'ಸಂವಿಧಾನ ಮತ್ತು ಸಮಕಾಲೀನ ಬಿಕ್ಕಟ್ಟುಗಳು' (ಸಂಪಾದನೆ) ಕಂಚೋಬಳ ದೇವರ ಸಾಂಸ್ಕೃತಿಕ ನೆಲೆಗಳು (ಸಂಶೋಧನೆ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ, 'ಏವೇಕಯಾನ' ಎನ್ನುವ ನಾಟಕ ರಚನೆಗೆ 2017ನೇ ಸಾಲಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಪ್ರಥಮ ಬಹುಮಾನಕ್ಕೆ ಪಡೆದಿರುತ್ತಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿ(6), ಭೀಮವಾದ ಸಂಘಟನೆಯ ಮಾಧ್ಯಮ ಸಲಹೆಗಾರರಾಗಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಭೀಮವಾದ ಮಾಸಪತ್ರಿಕೆಯ ಸಹ ಸಂಪಾದಕರಾಗಿ, 'ಅರಿವು ಅಸ್ಮಿತೆ' ಪತ್ರಿಕೆಯ ಸಂಪಾದಕರಾಗಿಕಾರ್ಯನಿರ್ವಹಿಸುತ್ತಿದ್ದಾರೆ. ಭೀಮವಾದ ಮಾಸಪತ್ರಿಕೆ ಮತ್ತು ಸುದ್ದಿದಿನ ಆನ್ಲೈನ್ ಪೋರ್ಟಲ್‌ನಲ್ಲಿ 'ನೆಲದನಿ' ಎಂನ ಅಂಕಣದ ಮೂಲಕ ಹಲವಾರು ಚಿಂತಕರು, ಹೋರಾಟಗಾರರು ಹಾಗೂ ಕಲಾವಿದರ ಮೇಲೆ ಬೆಳಕು ಚೆಲ್ಲಿದ್ದಾರೆ. ಹಾಗೆಯೇ ಭೀಮವಾದ ಪತ್ರಿಕೆಯಲ್ಲಿ 'ಮಿಡಿದವರೊಂದಿಗೆ ಮಾತುಕತೆ' ಎಂಬ ಅಂಕಣದ ಮೂಲಕ ಹಲವಾರು ದಾರ್ಶನಿಕರ ಸಂದರ್ಶನಾತ್ಮಕ ಅಂಕಣಗಳನ್ನು ಪ್ರಕಟಿಸಿರುತ್ತಾರೆ. ಹಲವಾರು ವರ್ಷಗಳ ಕಾಲ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿದ್ದು, ಕಾನೂನು ವಿಷಯದಲ್ಲಿ ಪದವಿ ಪಡೆದು ಪ್ರಸ್ತುತ ವಕೀಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಪ್ರೊ. ಜಯರಾಮಯ್ಯ ವಿ.
ಸದಸ್ಯರುಪ್ರೊ. ಜಯರಾಮಯ್ಯ ವಿ. ಅವರು ಬೆಂಗಳೂರು ದಕ್ಷಿಣ ಜಿಲ್ಲೆ, ಮಾಗಡಿ ತಾಲ್ಲೂಕಿನ, ಚಕ್ರಭಾವಿ ಗ್ರಾಮದ ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀ ವೆಂಕಟಸ್ವಾಮಯ್ಯ ದಂಪತಿಗಳ ಮಗನಾಗಿ ದಿನಾಂಕ: 25.06.1981 ರಂದು ಜನಿಸಿದರು. ಚಕ್ರಭಾವಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿ, ಪ್ರೌಢಶಿಕ್ಷಣವನ್ನು ಹುಲಿಕಟ್ಟೆಯಲ್ಲಿ ಮುಗಿಸಿದರು. ಬೆಂಗಳೂರಿನ ಶ್ರೀಗಂಧದ ಕಾವಲು ಕಾಲೇಜಿನಲ್ಲಿ ಪದವಿಯನ್ನು ಪಡೆದ ಇವರು ಎಂ.ಎ. ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಮುಗಿಸಿದರು. ಕನ್ನಡ ವಿಶ್ವವಿದ್ಯಾನಿಲಯ, ಹಂಪಿಯಿಂದ ಎಂ.ಫಿಲ್. ಮತ್ತು ಎಪಿಗ್ರಫಿ ಡಿಪ್ಲೊಮಾವನ್ನು ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ. ಎಂ. ಜಿ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ “ಕನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ” ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯವು ಇವರ ಮಹಾಪ್ರಬಂಧವನ್ನು ಅತ್ಯುತ್ತಮ ಪಿಎಚ್.ಡಿ. ಮಹಾಪ್ರಬಂಧವೆಂದು ಪರಿಗಣಿಸಿ “ಆ. ನೇ. ಉಪಾಧ್ಯ' ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ. ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಇವರು, ವಿಭಾಗದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಹಾಗೂ ದಾವಣಗೆರೆ ಮತ್ತು ಹಾವೇರಿ ವಿಶ್ವವಿದ್ಯಾನಿಲಯಗಳ BOS ಮತ್ತು BOE ಅಧ್ಯಕ್ಷರಾಗಿಯೂ, ದಾವಣಗೆರೆ ವಿಶ್ವವಿದ್ಯಾನಿಲಯದ 'ಸರ್ವಜ್ಞ ಅಧ್ಯಯನ ಕೇಂದ್ರ'ದ ನಿರ್ದೇಶಕರಾಗಿಯೂ, ಭಾರತದ ಹಲವಾರು ವಿಶ್ವವಿದ್ಯಾಲಯಗಳಲ್ಲಿ BOS ಮತ್ತು BOE ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕನ್ನಡ ಸಾಹಿತ್ಯ ಭಂಡಾರ, ಕನ್ನಡ ಶಾಸನ ಸಾಹಿತ್ಯ, ಕನ್ನಡ ಶಾಸನ ಸಾಹಿತ್ಯ ಸಂಶೋಧನೆ, ಬಹುಮುಖಿ, ಬೇಲೂರು ನಾಯಕರ ಶಾಸನಗಳು, ಪ್ರಜ್ಞೆ, ಶಾಸನ ಸಂತೆ, ಸಾಹಿತ್ಯ ಸಂತೆ, ಚಕ್ರಭಾವಿ ಸಾಂಸ್ಕೃತಿಕ ಇತಿಹಾಸ, ಕನ್ನಡ ಶಾಸನ ಸಾಹಿತ್ಯ ಚರಿತ್ರೆ, ಶೋಧನೆ, ಪುನರ್ಶೋಧ, ಸಾಹಿತ್ಯ ಕಣಜ ಮುಂತಾದವುಗಳು ಇವರ ಮುಖ್ಯ ಕೃತಿಗಳಾಗಿವೆ. ಇವರ ಮಾರ್ಗದರ್ಶನದಲ್ಲಿ ಏಳು ಜನ ವಿದ್ಯಾರ್ಥಿಗಳು ಪಿಎಚ್.ಡಿ. ಸಂಶೋಧನೆಯನ್ನು ಪೂರ್ಣಗೊಳಿಸಿದ್ದು, ಪ್ರಸ್ತುತ ಎಂಟು ಜನ ವಿದ್ಯಾರ್ಥಿಗಳು ಸಂಶೋಧನೆಯನ್ನು ಮಾಡುತ್ತಿದ್ದಾರೆ.
ಡಾ.ಕಾವ್ಯಶ್ರೀ ಕೆ
ಸದಸ್ಯರುಡಾ. ಕಾವ್ಯಶ್ರೀ. ಕೆ ಅವರು ದಾವಣಗೆರೆ ಜಿಲ್ಲೆಯ ಕೃಷ್ಣಾಚಾರಿ ಹಾಗೂ ಭಾಗೀರಥಿ ದಂಪತಿಗಳ ಮಗಳಾಗಿ ದಿನಾಂಕ: ೨೪.೧೨.೧೯೮೮ ರಂದು ಜನಿಸಿದರು. ಪಾಥ್ರಮಿಕ ಹಾಗೂ ಫ್ರೌಢಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದರು. ಹಾಗೂ ಎ.ವಿ.ಕೆ ಕಾಲೇಜಿನಲ್ಲಿ ಪದವಿಯನ್ನು ಪಡೆದ ಇವರು ಎಂ.ಎ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತç ಅಧ್ಯಯನ ಕೇಂದ್ರದಲ್ಲಿ ಹಾಗೂ ದೂರ ಶಿಕ್ಷಣ ವಿಭಾಗದಲ್ಲಿ ಇತಿಹಾಸ ಮತ್ತು ಪುರಾತತ್ವಶಾಸ್ತç ಮುಗಿಸಿದರು. ನೂತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಪದವಿಯನ್ನು ಮುಗಿಸಿದರು. ಕನ್ನಡ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದಿಂದ ಪ್ರಾಧ್ಯಪಕರಾದ ಪ್ರೊ. ಗಂಗಾಧರ ದೈವಜ್ಞ ಅವರ ಮಾರ್ಗದರ್ಶನದಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ. ಚಂದ್ರಶೇಖರ್ ಇವರ ಸಹಮಾರ್ಗದರ್ಶನದಲ್ಲಿ “ದೀವರ ಬದುಕಿನ ಸ್ಥಿತ್ಯಂತರಗಳು” ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ದಾವಣಗೆರೆ ವಿಶ್ವವಿದ್ಯಾನಿಲಯ ಹೊನ್ನಾಳಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತçದ ಅತಿಥಿ ಉಪನ್ಯಾಸಕಿಯಾಗಿ ಹಾಗೂ ದಾವಣಗೆರೆ ಪ್ರತಿಷ್ಟಿತ ಬಾಪೂಜಿ ಸಂಸ್ಥೆಯ ಎಂ.ಎಸ್.ಬಿ ಹಾಗೂ ಎ. ಆರ್. ಜಿ ಕಾಲೇಜಿನಲ್ಲಿ ಸಮಾಜಶಾಸ್ತçದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿತ್ತಿದ್ದಾರೆ. ಸುಮಾರು ೨೦ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.
ಡಾ.ನಿಂಗಪ್ಪ ಮುದೇನೂರ
ಸದಸ್ಯರುಪ್ರಾಧ್ಯಾಪಕರು, ಕನ್ನಡ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-580005
ಡಾ.ನಾರಾಯಣ ಸ್ವಾಮಿ
ಸದಸ್ಯರುAssistant Professor, Dept of Kannada Govt First Grade college, Frezer town, Benglore-560005
ಡಾ.ಹೆಚ್.ಟಿ ಪೊತೆ
ಸದಸ್ಯರುನಿರ್ದೇಶಕರು, ಕನ್ನಡ ಇಲಾಖೆ, ಗುಲ್ಬರ್ಗ ವಿಶ್ವವಿದ್ಯಾಲಯ, ಕಲ್ಬುರ್ಗಿ-585106