ಸಂಪಾದಕರ ಮಾತು
ಅತ್ಯಾಧುನಿಕ ಸಂಶೋಧನೆಗಳು: ವರವೋ ಶಾಪವೋ..!
ಅಮೆರಿಕಾದಂತಹ ಮುಂದುವರೆದ ರಾಷ್ಟ್ರಗಳು ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಲು ಹಾಗೂ ತಾವು ತಯಾರಿಸಿದ ಯುದ್ದೋಪಕರಣಗಳಿಗೆ ಬೇಡಿಕೆ ಹೆಚ್ಚಿಸಿಕೊಳ್ಳುವ ಮಾರುಕಟ್ಟೆ ಮನಸ್ಥಿತಿಯಿಂದ ಹಲವಾರು ರಾಷ್ಟçಗಳ ನಡುವೆ ಯುದ್ಧಗಳು ಆರಂಭವಾಗುತ್ತಿವೆ. ಈ ಹಿಂದೆ ರಷ್ಯಾ-ಉಕ್ರೇನ್, ಭಾರತ-ಪಾಕ್ ಮುಂತಾದ ರಾಷ್ಟçಗಳ ನಡುವೆ ಯುದ್ಧ ಆರಂಭವಾಗಿ ಮುಕ್ತಾಯದ ಹಂತಕ್ಕೆ ಬಂದ ಕಾಲದಲ್ಲಿ ಪ್ರಸ್ತುತ ಇಸ್ರೇಲ್ ಮತ್ತು ಇರಾನಿನ ನಡುವೇ ಭೀಕರ ಯುದ್ಧ ಪ್ರಾರಂಭವಾಗಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.

