ಗುರುವಾರ, 01 ಅಕ್ಟೋಬರ್ 2026
ಸಂಪಾದಕೀಯ ಲಾಗಿನ್ →
ಅರಿವು ಅಸ್ಮಿತೆ • ತ್ರೈಮಾಸಿಕ ಸಂಶೋಧನಾ ವೇದಿಕೆ
11 ಪ್ರಕಟಿತ ಸಂಚಿಕೆಗಳು
|
0 ಸಂಶೋಧನಾ ಲೇಖನಗಳು
|
6 ವಿದ್ವಾಂಸರು & ಲೇಖಕರು
“
ಡಾ. ಕೆ.ಎ. ಓಬಳಪ್ಪ
ಪ್ರಧಾನ ಸಂಪಾದಕರು

ಡಾ. ಕೆ.ಎ. ಓಬಳಪ್ಪ

ಸಂಪಾದಕರು ಹಾಗೂ ಪ್ರಕಾಶಕರು

ಏಕಾಂತಗಿರಿ ಟ್ರಸ್ಟ್ (ರಿ.)

ಸಂಪಾದಕರ ನುಡಿ • EDITOR'S DESK

ಸಂಶೋಧನೆಯೇ ಕೇಂದ್ರವಾಗಿ: ‘ಅರಿವು ಅಸ್ಮಿತೆ’ ನವ ಹೆಜ್ಜೆ

ನಮ್ಮ ಮುಂದಿನ ಹೊಸ ಹೊಸ ಸಂಶೋಧನೆಗಳನ್ನು ಪ್ರಕಟಿಸಿ ಜನಮುಖಿಯಾಗಿಸುವತ್ತ ಹಲವಾರು ಪತ್ರಿಕೆಗಳು ಕಾರ್ಯಪ್ರವೃತ್ತವಾಗಿವೆ. ಸಂಶೋಧನೆಗಾಗಿಯೇ ಕೆಲವು ಪತ್ರಿಕೆಗಳು ವಿವಿಧ ಭಾಷೆಯಲ್ಲಿ ಕಾರ್ಯಪ್ರವೃತ್ತವಾಗಿವೆ. ಆದರೆ ಕನ್ನಡದ ಸಂದರ್ಭದಲ್ಲಿ ಸಂಶೋಧನೆಗಾಗಿಯೇ ಮೀಸಲಿರುವ ಪತ್ರಿಕೆಗಳು ತೀರಾ ವಿರಳ. ಹೀಗಾಗಿ ಸಂಶೋಧನೆಯನ್ನೇ ಕೇಂದ್ರವಾಗಿಟ್ಟುಕೊಂಡು ಒಂದು ಪತ್ರಿಕೆಯನ್ನು ಆರಂಭಿಸಬೇಕೆಂಬ ತುಡಿತ ನಾನು ಸಂಶೋಧನಾ ವಿದ್ಯಾರ್ಥಿಯಾಗಿದ್ದಾಗಿನಿಂದಲೂ ನನ್ನೊಳಗೆ ಮನೆಮಾಡಿಕೊಂಡಿತ್ತು.

ನನ್ನ ಬಹುದಿನದ ತುಡಿತದ ಭಾಗವಾಗಿ ಒಂದು ಹೆಜ್ಜೆಯನ್ನು ಮುಂದಿಡಲಾಗಿದೆ. ಇದರ ಫಲವೇ ‘ಅರಿವು ಅಸ್ಮಿತೆ’ ಎಂಬ ತ್ರೈಮಾಸಿಕ ಪತ್ರಿಕೆ. ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಿಂದ ಕೂಡಿದೆ. ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ಸಂಶೋಧನಾರ್ಥಿಗಳು ಹಾಗೂ ನಾಡಿನ ವಿವಿಧ ವಲಯದ ಸಂಶೋಧಕರು ನಡೆಸಿದ ಅಧ್ಯಯನದ ಮಾಹಿತಿಯನ್ನು ಜನಮುಖಿಯಾಗಿಸುವ ಆಶಯವನ್ನು ಈ ಪತ್ರಿಕೆ ಒಳಗೊಂಡಿದೆ. ಆದ ಕಾರಣ ನಾಡಿನ ವಿವಿಧ ವಲಯದ ವಿದ್ವಾಂಸರು, ಚಿಂತಕರು, ಸಂಶೋಧಕರುಗಳು ನಮ್ಮ ಈ ಕಾರ್ಯಕ್ಕೆ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ಏಕಾಂತಗಿರಿ ಟ್ರಸ್ಟ್ ಅಡಿಯಲ್ಲಿ ಈಗಾಗಲೇ ಪುಸ್ತಕ ಪ್ರಕಟಣೆ, ಸಾಮಾಜಿಕ ಜಾಗೃತಿ ಮುಂತಾದ ಸೇವೆಗಳನ್ನು ಆರಂಭಿಸಿದ್ದು, ಮುಂದುವರೆದು ‘ಅರಿವು ಅಸ್ಮಿತೆ’ ಎಂಬ ಸಂಶೋಧನಾ ಪತ್ರಿಕೆಯ ಪ್ರಕಟಣೆಗೂ ಮುಂದಾಗಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಿರಂತರವಾಗಿ ಪ್ರೋತ್ಸಾಹ ನೀಡುತ್ತ ಬಂದಿರುವ ನಮ್ಮ ಟ್ರಸ್ಟಿನ ಎಲ್ಲಾ ಸದಸ್ಯರಿಗೂ, ಗುರುವೃಂದಕ್ಕೂ ಹಾಗೂ ನನ್ನ ಎಲ್ಲಾ ಆತ್ಮೀಯ ಸ್ನೇಹಿತರಿಗೂ ನಾನು ಸದಾ ಅಭಾರಿಯಾಗಿದ್ದೇನೆ.

ತ್ರೈಮಾಸಿಕ ಸಂಶೋಧನಾ ಪತ್ರಿಕೆ (Bilingual Quarterly)
— ಡಾ. ಕೆ.ಎ. ಓಬಳಪ್ಪ ಸಂಪಾದಕರು, ಅರಿವು ಅಸ್ಮಿತೆ
✍️ ಲೇಖನ ಆಹ್ವಾನ • Call for Papers

ನಿಮ್ಮ ಸಂಶೋಧನಾ ಬರಹಗಳನ್ನು 'ಅರಿವು ಅಸ್ಮಿತೆ'ಗೆ ಕಳುಹಿಸಿ

ನಾಡಿನ ಸಂಸ್ಕೃತಿ, ಇತಿಹಾಸ, ವಚನ ಸಾಹಿತ್ಯ, ಸಾಮಾಜಿಕ ಚಿಂತನೆಗಳು ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತ ಮೌಲಿಕ ಸಂಶೋಧನಾ ಲೇಖನಗಳನ್ನು ಸಂಪಾದಕೀಯ ಮಂಡಳಿಯು ಮುಕ್ತವಾಗಿ ಸ್ವಾಗತಿಸುತ್ತದೆ.

ವಸ್ತುನಿಷ್ಠ ಸಂಶೋಧನೆ ಅಪ್ರಕಟಿತ ಬರಹ ವಿಮರ್ಶಾತ್ಮಕ ದೃಷ್ಟಿಕೋನ
ಲೇಖನ ಸಲ್ಲಿಸಲು ವಿವರಗಳು
📖 ಚಂದಾದಾರರಾಗಿ • Digital Membership
Active Plans

ನಿಯತಕಾಲಿಕೆಯ ಸಮಗ್ರ ಸಂಚಿಕೆಗಳನ್ನು ನಿರಂತರವಾಗಿ ಓದಿ

ವಾರ್ಷಿಕ ಅಥವಾ ದ್ವೈವಾರ್ಷಿಕ ಚಂದಾದಾರರಾಗುವ ಮೂಲಕ ಎಲ್ಲಾ ಸಂಚಿಕೆಗಳ ಸಂಪೂರ್ಣ ಡಿಜಿಟಲ್ ಇ-ಪೇಪರ್ ಪ್ರವೇಶ ಹಾಗೂ ಹಿಂದಿನ ಎಲ್ಲಾ ಆರ್ಚೀವ್‌ಗಳ ಪೂರ್ಣ ಪ್ರತಿಯನ್ನು ಪಡೆದುಕೊಳ್ಳಿ.

1 Year Plan
₹ 800 / 4 ಸಂಚಿಕೆ
Best Value
2 Year Plan
₹ 1500 / 8 ಸಂಚಿಕೆ
ಚಂದಾದಾರರಾಗಲು ಸಂದೇಶ ಕಳುಹಿಸಿ